ರಾಜ್ಯ ಮಟ್ಟದ ಜಾನಪದ ಜಾತ್ರೆ ಕಲಾ ಜಾಥಾ ಉದ್ಘಾಟಿಸಿ ಜೊಡೆತ್ತಿನ ಬಂಡಿ ಓಡಿಸಿದ ನೆಹರು ಓಲೇಕಾರ

ಹಾವೇರಿ: 13: ರಾಜ್ಯ ಮಟ್ಟದ ಜಾನಪದ ಜಾತ್ರೆ ಅಂಗವಾಗಿ ಹಾವೇರಿ ನಗರದಲ್ಲಿಂದು ಬೃಹತ್ ಕಲಾಜಾಥಾ ನಡೆಯಿತು. ಮುರುಘಾಮಠದ ಆವರಣದಲ್ಲಿ ಕಲಾಜಾಥಾಕ್ಕೆ ಚಾಲನೆ ನೀಡಿದ ಶಾಸಕ ನೆಹರು ಓಲೇಕಾರ ಜೊಡೆತ್ತಿನ ಬಂಡಿ ಓಡಿಸುವುದರ ಮೂಲಕ ಎಲ್ಲರ ಗಮನ ಸೆಳೆದರು.

ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಜಾನಪದ ಜಾತ್ರೆಯ ಮೆರವಣಿಗೆಯಲ್ಲಿ 18ಕ್ಕೂ ಹೆಚ್ಚು ಕಲಾ ತಂಡಗಳು, ಯುವಕ ಸಂಘಗಳು, ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಭಾಗವಹಿಸಿ ದೇಶಿ ಪರಂಪರೆಯ ವೈಭವವನ್ನು ಸಾರಿಸಿದರು.

 ಪಾರಂಪರಿಕ ಕಹಳೆ ವಾದ್ಯಗಳನ್ನು  ಊದುವುದರೊಂದಿಗೆ ಆರಂಭಿಸಲಾದ ಜಾನಪದ ಜಾತ್ರೆಯ ಮೆರವಣಿಗೆಯುದ್ಧಕ್ಕೂ ವೈವಿಧ್ಯಮಯ ದೇಶಿ ವಾದ್ಯಗಳ ನಿನಾದಾ, ಜನಪದ ಕುಣಿತಗಳು, ಕೋಲಾಟ, ಡೊಳ್ಳು ಕುಣಿತ, ಕರಡಿಮಜಲು, ಹೆಜ್ಜೆಮೇಳ, ನಂದಿಕೋಲು ಕುಣಿತ, ನವಿಲು ಕುಣಿತ, ಜಗ್ಗಲಿಗೆ, ನಗಾರಿ ಹೀಗೆ ಹಲವು ಬಗೆಯ ಗ್ರಾಮೀಣ ಸೊಗಡಿನ ಕಲೆಗಳ ಅನಾವರಣ ನೋಡುಗರಿಗೆ ರೋಮಾಂಚನಗೊಳಿಸಿತು. ತಾಳಬದ್ಧ ನಾದಗಳಿಗೆ ಲಯಬದ್ಧ ಕುಣಿತಗಳು ನೋಡುಗುರ ಗಮನ ಸೆಳೆದವು. ಮುರಾಘಮಠದಿಂದ ಪಿ.ಬಿ.ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ಧಪ್ಪ ವೃತ್, ಗಾಂಧಿ ವೃತ್ತದ ಮಾರುಕಟ್ಟೆ ಮೂಲಕ ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ನಡೆದ ಜಾನಪದ ಮೆರವಣಿಗೆಯಲ್ಲಿ ವಿವಿಧ ಶಾಲೆಯ 2000ಕ್ಕೂ ಅಧಿಕ ಮಕ್ಕಳು ಡೆಂಬಲ್ಸ್, ಕೋಲಾಟ, ಲೇಜಿಮ್ನೊಂದಿಗೆ ಭಾಗವಹಿಸಿ ಮೆರವಣಿಗೆಯಲ್ಲಿ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದರು.

    ರಾಜ್ಯದ ವಿವಿಧ ಜಿಲ್ಲೆಯಿಂದ ಬಂದ 300ಕ್ಕೂ ಅಧಿಕ  ಜಾನಪದ ಕಲಾವಿದರು, ಯುವ ಸಂಘಟನೆಗಳ ಕಲಾವಿದರು ಭಾಗವಹಿಸಿ ಮೆರವಣಿಗೆ ಮೆರಗು ತಂದರು.

ಕಾರ್ಯಕ್ರಮದಲ್ಲಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದರ್ೇಶಕರದ ಅಶೋಕ ಚಲವಾದಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡಿ, ಉಪ ವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಂ.ಪಾಟೀಲ್, ತಹಶೀಲ್ದಾರ ಶಂಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಶ್ರೀಮತಿ ನಿದರ್ೇಶಕಿ ಶಶಿಕಲಾ ಹುಡೆದ, ಸಿಪಿಐ ಪ್ರಭಾವತಿ ಶೇತಸನದಿ, ನಗರಸಭೆ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಮೇರವಣಿಗೆಯಲ್ಲಿ ಭಾಗವಹಿಸಿದ ತಂಡಗಳು: ಹಾನಗಲ್ಲಿನ ರುದ್ರಪ್ಪ ಬಡಿಗೇರ ಪುರವಂತಿಕೆ, ಅಗಡಿಯ ವೀರಭದ್ರಪ್ಪ ಭಜಂತ್ರಿ ಅವರಿಂದ ಕರಡಿಮಜಲು, ಕನವಳ್ಳಿಯ ಸಂತೋಷ ಭಜಂತ್ರಿ ಹಾಗೂ ಹಿರೇಕೆರೂರಿನ ಚಿಕ್ಕಯಡಚಿಯ ಫಕ್ಕೀರಪ್ಪ ಚಲವಾದಿ ನಾಸಿಕ್ ಡೋಲ್, ಶಿಗ್ಗಾಂವಿಯ ಗುಡ್ಡದಚನ್ನಾಪುರದ ಅಶೋಕ ಮಾವೂರ, ಹಾವೇರಿಯ ಹತ್ತಿಮತ್ತೂರಿನ ರಾಜು ಲಮಾಣಿ, ಹಾನಗಲ್ಲಿನ ಶೇಷಗಿರಿಯ ಶಿವಮೂತರ್ಿ ಹುಣಶೀಹಳ್ಳಿ, ಇನಾಂಯಲ್ಲಾಪೂರದ ಬಡಿವೆಪ್ಪ ಅನವಟ್ಟಿ, ಸವಣೂರಿನ ಹೂವಿನಶಿಗ್ಲಿಯ ಯಲ್ಲಪ್ಪ ಕಂಬಳಿ ಅವರಿಂದ ಡೊಳ್ಳು, ಹಾನಗಲ್ಲಿನ ದತ್ತಾತ್ರೆಯ ಸುಗಂಧಿ ಬೇಡರ ವೇಷ, ಹಾನಗಲ್ಲಿ ತಾಲೂಕಿನ ನಿಟ್ಟೂರಿನ ಮಹೇಶಪ್ಪ ಕಾಯಕದ  ನಂದಿಕೋಲು, ಹಿರೇಕೆರೂರಿನ ಚಿಕ್ಕಯಡಚ್ಚಿಯ ಕುಮಾರ ಚಲವಾದಿ ಕೀಲು ಕುದುರೆ, ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ರೇವಣಪ್ಪ ಬೇವಿನಮರದ ಹಲಗೆ ವಾದನ, ಸವಣೂರು 

ತಾಲೂಕಿನ ಹತ್ತಿಮತ್ತೂರಿನ ಶಶಿಕಲಾ ಲಮಾಣಿ ಲಂಬಾಣಿನೃತ್ಯ, ರಾಣೇಬೆನ್ನೂರಿನ ಬಸವರಾಜ ಸಾವಕ್ಕನವರ್, ಆಡೂರಿನ ಪ್ರವೀಣ ಕಡೆರ್  ಜಾಂಝ, ಶಿಗ್ಗಾಂವಿಯ ರಾಮಣ್ಣ ಬಾದಗಿ ಸುಡಗಾಡ ಸಿದ್ದರು, ರಾಣೇಬೆನ್ನೂರಿನ ದೇವರಗುಡ್ಡದ ಶಂಕ್ರಪ್ಪ ವೇಷಗಾರ  ಹಗಲುವೇಷ, ಶಿಗ್ಗಾಂವಿಯ ಅಂದಲಗಿ ಗ್ರಾಮದ ಯಲ್ಲಪ್ಪ ಗಾಳೆಪ್ಪನವರ ಗೋರವ ಕುಣಿತ, ದಾಂಡೇಲಿಯ ವಿದ್ಯಾನರಗುಂದದ ವಿದ್ಯಾಮಸಾನೆ ಜಾನಪದ ನೃತ್ಯ, ರಾಮನಗರದ ಸುದೀಪ ಪಟಕುಣಿತ, ಮೈಸೂರಿನ ದಿಲೀಪ್ ತಮಟೆ, ಮಂಡ್ಯದ ವೆಂಕಟಸ್ವಾಮಿ ನಗಾರಿ, ಚಿತ್ರದುರ್ಗದ ನರಸಿಂಹಯ್ಯ ಕಹಳೆ, ಧಾರವಾಡದ ಮಂಜುನಾಥ್ ಮಾದರ ಜಗ್ಗಲಿಗೆ, ಬೆಂಗಳೂರಿನ ಕವಿತಾ ಮಹಿಳಾ ತಮಟೆ, ಕಾರವಾರದ ಜ್ಯುಲಿಯಾನಾ ಸಿದ್ದಿ ಡಮಾಮಿ ನೃತ್ಯ, ಮಾರಣ್ಣ ತಂಡದವರಿಂದ ಚಿಲಿ-ಪಿಲಿ, ಮೈಸೂರಿನ  ದೇವಯ್ಯ ತಂಡದವರಿಂದ ಕಂಸಾಳೆ, ಮಂಡ್ಯದ ಸತೀಶ  ಪೂಜಾ ಕುಣಿತ, ಚಿತ್ರದುರ್ಗದ ಶ್ರೀನಿವಾಸ ಕೀಲುಕುದುರೆ, ಚಿಕ್ಕಮಗಳೂರಿನ ಶಾರದಾ ಮಹಿಳಾ ವೀರಗಾಸೆ, ಶಿಗ್ಗಾಂವಿಯ ಗೋವಿಂದಪ್ಪ ತಳವಾರ  ರಂಗ ಗೀತೆಗಳು, ಭಟ್ಕಳ ನಾಗಪ್ಪಗೊಂಡ ಡಕ್ಕೆ ಕುಣಿತ, ಉಡುಪಿಯ ಸಂತೋಷ ತಂಡದವರಿಂದ ಕಂಗೀಲು, ರಾಮನಗರದ ಶಿವಶಂಕರನಾಯ್ಕ್  ಪೂಜಾ ಕುಣಿತದಲ್ಲಿ ಭಾಗವಹಿಸಿ ಸಾರ್ವಜನಿಕರ